ಅಕ್ಟೋಬರ್ ೩೧ - ಅಕ್ಟೋಬರ್ ತಿಂಗಳ ಮೂವತ್ತ ಒಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೦೪ನೇ (ಅಧಿಕ ವರ್ಷದಲ್ಲಿ ೩೦೫ನೇ) ದಿನ. ಅಕ್ಟೋಬರ್ ೨೦೨೪ == ಪ್ರಮುಖ ಘಟನೆಗಳು == ೧೫೧೭ - ಕ್ರೈಸ್ತ ಧರ್ಮದ ಪ್ರೋಟೆಸ್ಟೆಂಟ್ ಪಂಗಡದ ಸ್ಥಾಪಕ ಮಾರ್ಟಿನ್ ಲೂಥರ್ ಅಂದಿನ ಧಾರ್ಮಿಕ ಪದ್ಧತಿಗಳ ವಿರುದ್ಧ ತನ್ನ ೯೫ ವಾದಗಳನ್ನು ಮೊದಲು ಪ್ರದರ್ಶಿಸಿದ. ೧೮೭೫ - ಒಂದು ಭೀಕರ ಚಂಡಮಾರುತವು ಭಾರತದಲ್ಲಿ ಸುಮಾರು ೨೦೦,೦೦೦ ಜನರನ್ನು ಬಲಿ ತಗೆದುಕೊಂಡಿತು. ೧೯೮೪ - ಭಾರತದ ಪ್ರಧಾನಮಂತ್ರಿ ಇಂದಿರಾ ಗಾಂಧಿ ತನ್ನ ರಕ್ಷಣ ಪಡೆಯ ಇಬ್ಬರು ಸಿಖ್ ಪೇದೆಗಳ ಗುಂಡಿಗೆ ಬಲಿ. ನಂತರ ನವ ದೆಹಲಿಯಲ್ಲಿ ಉಂಟಾದ ಗಲಭೆಗಳಲ್ಲಿ ಸುಮಾರು ೨,೦೦೦ ಮುಗ್ದ ಸಿಖ್ಖರ ಬಲಿ. ೨೦೦೩ - ೨೨ ವರ್ಷಗಳ ಅಧಿಕಾರದ ನಂತರ ಮಲೇಶಿಯದ ಪ್ರಧಾನ ಮಂತ್ರಿ ಮಹಾತಿರ್ ಮೊಹಮ್ಮದ್ ರಾಜಿನಾಮೆ. == ಜನನ == ೧೭೯೫ - ಜಾನ್ ಕೀಟ್ಸ್, ಬ್ರಿಟನ್ನ ಕವಿ. ೧೮೭೫ - ಸರ್ದಾರ್ ವಲ್ಲಭಭಾಯ್ ಪಟೇಲ್, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ ಮತ್ತು ರಾಜಕೀಯ ಮುತ್ಸದ್ದಿ. ೧೮೮೭ - ಚಿಯಾಂಗ್ ಕೈ-ಶೆಕ್, ಚೀನಿ ಗಣರಾಜ್ಯದ ರಾಷ್ಟ್ರಪತಿ. ೧೯೨೨ - ಕಾಂಬೊಡಿಯದ ರಾಜ ನಾರೊಡೊಮ್ ಸಿಹನೊಕ್. == ನಿಧನ == ೧೯೨೬ - ಹ್ಯಾರಿ ಹೌದಿನಿ, ಹಂಗೆರಿ ಮೂಲದ ಜಾದೂಗಾರ. ೧೯೭೫ - ಎಸ್ ಡಿ ಬರ್ಮನ್, ಬಾಲಿವುಡ್ ಸಂಗೀತ ನಿರ್ದೇಶಕ. ೧೯೮೪ - ಇಂದಿರಾ ಗಾಂಧಿ, ಭಾರತದ ಪ್ರಧಾನಮಂತ್ರಿ. ೨೦೦೬ - ಪೈಟರ್ ವಿಲೆಮ್ ಬೊಥ, ದಕ್ಷಿಣ ಆಫ್ರಿಕದ ರಾಷ್ಟ್ರಪತಿ. == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ